ಹೂಡಿಕೆದಾರರಲ್ಲಿ ಜಾಗೃತಿ ಹೆಚ್ಚಿಸಲು ಭಾರತದ ರಿಯಲ್‌ ಎಸ್ಟೇಟ್‌ ಇನ್ವೆಸ್ಟ್‌ಮೆಂಟ್‌ ಟ್ರಸ್ಟ್ಸ್‌ (ಆರ್‌ಇಐಟಿ) ​​ಮತ್ತು ಇನ್‌ಫ್ರಾಸ್ಟ್ರಕ್ಚರ್‌ ಇನ್ವೆಸ್ಟ್‌ಮೆಂಟ್‌ ಟ್ರಸ್ಟ್ಸ್‌ (ಐಎನ್‌ವಿಐಟಿಎಸ್‌- ಇನ್‌ವಿಟ್ಸ್‌) ಸಹಯೋಗ

ಹೂಡಿಕೆದಾರರಲ್ಲಿ ಜಾಗೃತಿ ಹೆಚ್ಚಿಸಲು ಭಾರತದ ರಿಯಲ್‌ ಎಸ್ಟೇಟ್‌ ಇನ್ವೆಸ್ಟ್‌ಮೆಂಟ್‌ ಟ್ರಸ್ಟ್ಸ್‌ (ಆರ್‌ಇಐಟಿ) ​​ಮತ್ತು ಇನ್‌ಫ್ರಾಸ್ಟ್ರಕ್ಚರ್‌ ಇನ್ವೆಸ್ಟ್‌ಮೆಂಟ್‌ ಟ್ರಸ್ಟ್ಸ್‌ (ಐಎನ್‌ವಿಐಟಿಎಸ್‌- ಇನ್‌ವಿಟ್ಸ್‌) ಸಹಯೋಗ

  • Jun 05, 2024
  • Uncategorized
  • ಷೇರುಪೇಟೆಯಲ್ಲಿ ವಹಿವಾಟು ನಡೆಸುವ ಕಂಪನಿಗಳಾದ ಆರ್ಇಐಟಿ ಮತ್ತು ಐಎನ್ವಿಐಟಿಎಸ್ಅಸ್ತಿತ್ವಕ್ಕೆ ಬಂದ ಕ್ರಮವಾಗಿ 5 ಮತ್ತು 7 ವರ್ಷಗಳಲ್ಲಿ 30,000 ಕೋಟಿ ಮೊತ್ತವನ್ನು ತಮ್ಮ ಯುನಿಟ್ಹೊಂದಿರುವವರಿಗೆ ವಿತರಿಸಿವೆ

ಬೆಂಗಳೂರು, 5ನೇ ಜೂನ್ 2024: ಭಾರತದ ಹಣಕಾಸು ಕ್ಷೇತ್ರದಲ್ಲಿ ರಿಯಲ್ ಎಸ್ಟೇಟ್ ಇನ್ವೆಸ್ಟ್‌ಮೆಂಟ್ ಟ್ರಸ್ಟ್‌ಗಳು (ಆರ್‌ಇಐಟಿ-ಗಳು) ಮತ್ತು ಇನ್‌ಫ್ರಾಸ್ಟ್ರಕ್ಚರ್ ಇನ್ವೆಸ್ಟ್‌ಮೆಂಟ್ ಟ್ರಸ್ಟ್‌ಗಳ (ಇನ್ವಿಟ್ಸ್‌) ಬಗ್ಗೆ ಹೂಡಿಕೆದಾರರಲ್ಲಿ ತಿಳುವಳಿಕೆ ಹೆಚ್ಚಿಸಲು, ಭಾರತದ ರಿಯಲ್‌ ಎಸ್ಟೇಟ್‌ ಇನ್ವೆಸ್ಟ್‌ಮೆಂಟ್‌ ಟ್ರಸ್ಟ್‌ಗಳ (ಆರ್‌ಇಐಟಿ) ಸಂಘ ​​(ಐಆರ್‌ಎ) ಮತ್ತು ಭಾರತ್ ಇನ್‌ಫ್ರಾಸ್ಟ್ರಕ್ಚರ್‌ ಇನ್ವೆಸ್ಟ್‌ಮೆಂಟ್‌ ಟ್ರಸ್ಟ್‌ಗಳ (ಬಿಐಎ) ಸಂಘ ಪರಸ್ಪರ ಸಹಕರಿಸಲಿವೆ.

ಈ ಸಹಯೋಗವು ಈ ಎರಡೂ ಸಂಘಟನೆಗಳ ನಡುವಣ ಮೊದಲ ಪಾಲುದಾರಿಕೆಯಾಗಿದೆ. ಹೂಡಿಕೆದಾರರಿಗೆ ಶಿಕ್ಷಣ ನೀಡಲು ಮತ್ತು ʼಆರ್‌ಇಐಟಿʼ ಮತ್ತು ʼಇನ್ವಿಟ್‌ʼಗಳಲ್ಲಿ ಹೂಡಿಕೆಗೆ ಉತ್ತೇಜನ ನೀಡುವುದು, ಇವುಗಳ ಕಾರ್ಯನಿರ್ವಹಣೆ ಮತ್ತು ನಿಯಂತ್ರಣ ವ್ಯವಸ್ಥೆ ಬಲಪಡಿಸುವುದು, ಬಂಡವಾಳ ಮಾರುಕಟ್ಟೆಗಳನ್ನು ಬಲಪಡಿಸುವುದು ಮತ್ತು ಹೂಡಿಕೆದಾರರಲ್ಲಿ ಜಾಗೃತಿ ಹೆಚ್ಚಿಸುವುದು – ಈ ಸಹಯೋಗದ ಉದ್ದೇಶವಾಗಿದೆ.

ಭಾರತದ ರಿಯಲ್ಎಸ್ಟೇಟ್ಇನ್ವೆಸ್ಟ್ಮೆಂಟ್ಟ್ರಸ್ಟ್ಸ್(ಆರ್ಇಐಟಿ)   

ಭಾರತದ ʼಆರ್‌ಇಐಟಿʼ ಮಾರುಕಟ್ಟೆಯು ₹ 1,40,000 ಕೋಟಿಗೂ ಹೆಚ್ಚಿನ ಮೊತ್ತದ  ಒಟ್ಟು ಆಸ್ತಿ (ಎಯುಎಂ) ನಿರ್ವಹಿಸುತ್ತ ಗಮನಾರ್ಹ ಬೆಳವಣಿಗೆ ಸಾಧಿಸಿದೆ. ಇದರ ಒಟ್ಟಾರೆ ಮಾರುಕಟ್ಟೆ ಮೌಲ್ಯವು  ₹ 85,000 ಕೋಟಿಗಿಂತ ಹೆಚ್ಚಿಗೆ ಇದೆ. ದೇಶದಾದ್ಯಂತ ಎ ದರ್ಜೆ ಕಚೇರಿ ಮತ್ತು ರಿಟೇಲ್‌ ಸ್ಥಳಾವಕಾಶದ 115  ದಶಲಕ್ಷ  ಚದರ ಅಡಿಗಳ (ಎಂಎಸ್‌ಎಫ್‌) ನಿರ್ವಹಣೆ ಮೂಲಕ ಗಮನಾರ್ಹ ಬೆಳವಣಿಗೆ ಪ್ರದರ್ಶಿಸಿದೆ.   

ಕೇವಲ ಐದು ವರ್ಷಗಳಲ್ಲಿ, ʼಆರ್‌ಇಐಟಿʼಗಳು ₹ 17,000 ಕೋಟಿಗೂ ಹೆಚ್ಚಿನ ಮೊತ್ತವನ್ನು ತಮ್ಮ ಯುನಿಟ್‌ ಹೊಂದಿರುವವರಿಗೆ ವಿತರಿಸಿವೆ. ಈ ಮೊತ್ತವು ಒಟ್ಟಾರೆ ನಿಫ್ಟಿ ರಿಯಾಲ್ಟಿ ಸೂಚ್ಯಂಕದ ಒಟ್ಟಾರೆ  ವಿತರಣಾ ಮೊತ್ತವನ್ನು ಮೀರಿಸಿದೆ.  ಷೇರುಪೇಟೆಯಲ್ಲಿ ಪ್ರಾಥಮಿಕ ನೀಡಿಕೆಗಳು, ಆರಂಭಿಕ ವಹಿವಾಟು ಮತ್ತು ಪೂರಕ ಕೊಡುಗೆಗಳು ಒಳಗೊಂಡಂತೆ ಪ್ರಾಥಮಿಕ ವಿತರಣೆಗಳ ಮೂಲಕ ₹ 25,900 ಕೋಟಿಗಳಷ್ಟು ಮೊತ್ತದ ಷೇರು ಬಂಡವಾಳವನ್ನು ಸಂಗ್ರಹಿಸಿವೆ.

ಭಾರತವು ಸದ್ಯಕ್ಕೆ ʼಆರ್‌ಇಐಟಿʼ ಸಾಮರ್ಥ್ಯದ ಕಚೇರಿ ಸ್ಥಳದ 400 ದಶಲಕ್ಷ ಚದರ ಅಡಿ (ಎಂಎಸ್‌ಎಫ್‌) ಮತ್ತು ಆರ್‌ಇಐಟಿ-ಸಾಮರ್ಥ್ಯದ ರೀಟೆಲ್‌ ಸ್ಥಳದ 70 ದಶಲಕ್ಷ ಚದರ ಅಡಿಗಳಷ್ಟು (ಎಂಎಸ್‌ಎಫ್‌) ಸ್ಥಳಾವಕಾಶ ಹೊಂದಿದೆ. ಇದರಲ್ಲಿ ಕ್ರಮವಾಗಿ 100 ʼಎಂಎಸ್‌ಎಫ್‌ʼ ಮತ್ತು 10 ʼಎಂಎಸ್‌ಎಫ್‌ʼ  ಮಾತ್ರ ಭಾರತದ ʼಆರ್‌ಇಐಟಿʼಗಳ ಭಾಗವಾಗಿದೆ. ಇದು ಭಾರತದಲ್ಲಿ ʼಆರ್‌ಇಐಟಿʼ ಆಸ್ತಿ ವಿಭಾಗದದಲ್ಲಿ ಗಮನಾರ್ಹ ಬೆಳವಣಿಗೆಯ ಅವಕಾಶಗಳು ಇರುವುದನ್ನು ತೋರಿಸುತ್ತದೆ.

ಇನ್ಫ್ರಾಸ್ಟ್ರಕ್ಚರ್ಇನ್ವೆಸ್ಟ್ಮೆಂಟ್ಟ್ರಸ್ಟ್ಸ್(ಐಎನ್ವಿಐಟಿಎಸ್ಇನ್ವಿಟ್ಸ್)  

ಭಾರತದ ಮಾರುಕಟ್ಟೆಯಲ್ಲಿ ಪರಿಚಯಿಸಿದಾಗಿನಿಂದ, ಇನ್‌ಫ್ರಾಸ್ಟ್ರಕ್ಚರ್‌ ಇನ್ವೆಸ್ಟ್‌ಮೆಂಟ್‌ ಟ್ರಸ್ಟ್‌ಗಳು (ಇನ್‌ವಿಟ್ಸ್‌)  ಗಮನಾರ್ಹ ಬೆಳವಣಿಗೆಯನ್ನು ಸಾಧಿಸಿವೆ.  ದೇಶದಲ್ಲಿ ಮೂಲಸೌಲಭ್ಯ ಮಾಲೀಕತ್ವವು ಎಲ್ಲರಿಗೂ ಸಮಾನ ನೆಲೆಯಲ್ಲಿ  ದೊರೆಯುವಂತಾಗಲು ಪ್ರಮುಖ ಪಾತ್ರವನ್ನು ವಹಿಸಿವೆ. ರಸ್ತೆಗಳು, ವಿದ್ಯುತ್‌ ವಿತರಣಾ ಮಾರ್ಗಗಳು, ದೂರಸಂಪರ್ಕ (ಮೊಬೈಲ್‌)  ಗೋಪುರಗಳು, ಫೈಬರ್ ಕೇಬಲ್‌ಗಳು, ಉಗ್ರಾಣಗಳು, ನವೀಕರಿಸಬಹುದಾದ ಇಂಧನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮೂಲಸೌಕರ್ಯ ಸ್ವತ್ತುಗಳನ್ನು ಈ ಮೂಲಸೌಕರ್ಯ ಹೂಡಿಕೆ ಟ್ರಸ್ಟ್‌ಗಳು ಹೊಂದಿರುವುದರ ಜೊತೆಗೆ ಅವುಗಳನ್ನು ನಿರ್ವಹಿಸುತ್ತವೆ. ಹೂಡಿಕೆದಾರರಿಗೆ ವಿವಿಧ ಪ್ರಮಾಣದ ಹೂಡಿಕೆ ಸಾಧ್ಯತೆಗಳೊಂದಿಗೆ, ಆದಾಯ- ಹೆಚ್ಚಿಸುವ  ಮೂಲಸೌಕರ್ಯ ಸ್ವತ್ತುಗಳಲ್ಲಿ ಹೂಡಿಕೆ ಮಾಡಲು ನಿಯಂತ್ರಿತ ಮತ್ತು ಪಾರದರ್ಶಕ ಸ್ವರೂಪದಲ್ಲಿ ಅವಕಾಶಗಳನ್ನು ಒದಗಿಸುತ್ತವೆ.

ಸದ್ಯಕ್ಕೆ ಭಾರತವು ಷೇರುಪೇಟೆಯಲ್ಲಿ ವಹಿವಾಟು ನಡೆಸುವ ಇಂತಹ 4 ಸರ್ಕಾರಿ ಮತ್ತು 14 ಖಾಸಗಿ ಕಂಪನಿಗಳನ್ನು ಹೊಂದಿದೆ. ಇವುಗಳು ಒಟ್ಟಾರೆ  ₹ 5 ಲಕ್ಷ ಕೋಟಿ ಮೌಲ್ಯದ ಆಸ್ತಿಯನ್ನು ನಿರ್ವಹಿಸುತ್ತವೆ.  2019 ರಿಂದ  ಷೇರುಗಳ ರೂಪದಲ್ಲಿ ₹ 1.1 ಲಕ್ಷ ಕೋಟಿ ಮೊತ್ತವನ್ನು ಸಂಗ್ರಹಿಸಿವೆ. ಷೇರುಪೇಟೆಯಲ್ಲಿ ವಹಿವಾಟು ನಡೆಸುವ ನಾಲ್ಕು  ʼಇನ್‌ವಿಟ್ಸ್‌ ʼಗಳು ₹ 27,500 ಕೋಟಿ ಮೊತ್ತದ  ಒಟ್ಟು ಮಾರುಕಟ್ಟೆ  ಮೌಲ್ಯ ಹೊಂದಿವೆ.  2024ರ ಮಾರ್ಚ್ 31ಕ್ಕೆ  1.7 ಲಕ್ಷ ಯುನಿಟ್‌ ಧಾರಕರನ್ನು ಹೊಂದಿವೆ.  ಈ ವಿವರಗಳು ಭಾರತದ ದೀರ್ಘಾವಧಿಯ ಮೂಲಸೌಕರ್ಯ ಆಸ್ತಿಗಳ  ಮೇಲೆ  ಹೂಡಿಕೆದಾರರು ಇಟ್ಟಿರುವ ನಂಬಿಕೆಯ ದ್ಯೋತಕವಾಗಿವೆ.

ಮೂಲಸೌಕರ್ಯ ಹೂಡಿಕೆ ಟ್ರಸ್ಟ್‌ಗಳು ಹೆಚ್ಚು ನಿಯಂತ್ರಿತ, ಸುರಕ್ಷಿತ ಮತ್ತು ಪಾರದರ್ಶಕ ಹೂಡಿಕೆ ವಿಧಾನಗಳಾಗಿ ಗಮನ ಸೆಳೆಯುತ್ತಿವೆ.  ದೇಶದ ಮೂಲಸೌಕರ್ಯಗಳ ಬೆಳವಣಿಗೆಯ ಯಶೋಗಾಥೆಯಲ್ಲಿ   ಭಾಗವಹಿಸಲು ಹೂಡಿಕೆದಾರರಿಗೆ   ಅವಕಾಶಗಳನ್ನು ಒದಗಿಸುತ್ತವೆ. ಇವುಗಳನ್ನು ನಿಯಂತ್ರಿಸುವ ಕಟ್ಟುನಿಟ್ಟಾದ ನಿಯಮಗಳೊಂದಿಗೆ, ಈ ಟ್ರಸ್ಟ್‌ಗಳು  ಕಾರ್ಪೊರೇಟ್ ಆಡಳಿತ ಪದ್ಧತಿ ಅಳವಡಿಸಿಕೊಂಡು ಕಾರ್ಯನಿರ್ವಹಿಸುತ್ತವೆ. ತಮ್ಮ ಯುನಿಟ್‌ ಧಾರಕರಿಗೆ ಉತ್ತಮವಾದ ನಷ್ಟ-ಹೊಂದಾಣಿಕೆಯ ಆದಾಯವನ್ನು ಒದಗಿಸುತ್ತವೆ. ಸದೃಢ ಸ್ವರೂಪದ ಕಾರ್ಯಕ್ಷಮತೆ   ಪ್ರದರ್ಶಿಸಿದ ನಂತರ, ಈ ಮೂಲಸೌಕರ್ಯ ಹೂಡಿಕೆ ಟ್ರಸ್ಟ್‌ಗಳು ಮುಂದಿನ ದಶಕದಲ್ಲಿ ತಮ್ಮ ನಿರ್ವಹಣೆಯಲ್ಲಿ ಇರುವ ಸಂಪತ್ತಿನ ಮೊತ್ತವನ್ನು (ಎಯುಎಂ)  ₹ 20 ಲಕ್ಷ ಕೋಟಿಗೆ ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿವೆ.

ಪಾಲುದಾರಿಕೆ ಘೋಷಿಸಿದ ಸಮಾರಂಭದಲ್ಲಿ  ಭಾರತದ ರಿಯಲ್‌ ಎಸ್ಟೇಟ್‌ ಇನ್ವೆಸ್ಟ್‌ಮೆಂಟ್‌ ಟ್ರಸ್ಟ್ಸ್‌ನ  (ಆರ್‌ಇಐಟಿ) ವಕ್ತಾರರು ಮಾತನಾಡಿ,   ʼಸದ್ಯಕ್ಕೆ, ಭಾರತದ ರಿಯಲ್ ಎಸ್ಟೇಟ್ ವಲಯದ ಒಟ್ಟಾರೆ ಮಾರುಕಟ್ಟೆ ಮೌಲ್ಯದ ಶೇ  14 ರಷ್ಟನ್ನು  ʼಆರ್‌ಇಐಟಿʼಗಳು ಪ್ರತಿನಿಧಿಸುತ್ತವೆ. ಸದ್ಯಕ್ಕೆ 2,30,000 ಯುನಿಟ್‌ ಧಾರಕರನ್ನು ಹೊಂದಿರುವ ಈ ಕ್ಷೇತ್ರದಲ್ಲಿ   ಬೆಳವಣಿಗೆಗೆ ವಿಪುಲ ಅವಕಾಶಗಳು ಇರುವುದನ್ನು ಇದು ಸೂಚಿಸುತ್ತದೆ. ನಾವು ಶಿಕ್ಷಣ ಮತ್ತು ಜಾಗೃತಿಯನ್ನು ಹೆಚ್ಚಿಸಲು ವಿವಿಧ ಉಪಕ್ರಮಗಳ ಮೇಲೆ ಗಮನ ಕೇಂದ್ರೀಕರಿಸಿರುವುದರ ಜೊತೆಗೆ, ಇಲ್ಲಿನ ಹೂಡಿಕೆಯು ಷೇರುಗಳೆಂದು ವರ್ಗೀಕರಿಸಲು ಸರ್ಕಾರದ ವಿವಿಧ ಸಂಸ್ಥೆಗಳ ಜೊತೆ  ಸಹಯೋಗದಿಂದ ಕಾರ್ಯನಿರ್ವಹಿಸುತ್ತೇವೆ. ಈ ವರ್ಗೀಕರಣವು ಸೂಚ್ಯಂಕಗಳ ಸೇರ್ಪಡೆ,  ಈ ಟ್ರಸ್ಟ್‌ಗಳಲ್ಲಿ ಕಡಿಮೆ ವೆಚ್ಚದ ಹೂಡಿಕೆ ಆಕರ್ಷಿಸಲು  ಮತ್ತು ನಗದುತನ   ಉತ್ತೇಜಿಸಲು ನೆರವಾಗಲಿದೆ.  ಜೊತೆಗೆ ವಹಿವಾಟು ಚಟುವಟಿಕೆಗಳನ್ನು ಉತ್ತೇಜಿಸಲಿವೆ.  ʼಆರ್‌ಇಐಟಿʼಗಳನ್ನು  ಷೇರುಗಳೆಂದು ವರ್ಗೀಕರಿಸುವುದರಿಂದ  ಅವುಗಳನ್ನು ಇಟಿಎಫ್‌ ಅಥವಾ ಈಕ್ವಿಟಿ ಮ್ಯೂಚುವಲ್‌ ಫಂಡ್ಸ್‌ಗಳಲ್ಲಿ ಸೇರ್ಪಡೆಗೊಳಿಸಲು ನೆರವಾಗಲಿವೆ.  ಇದು ಹೆಚ್ಚಿನ ದ್ರವ್ಯತೆ ಮತ್ತು ಈ ಹೂಡಿಕೆ ಉತ್ಪನ್ನವನ್ನು ಹೂಡಿಕೆದಾರರು ವ್ಯಾಪಕವಾಗಿ ಒಪ್ಪಿಕೊಳ್ಳುವುದನ್ನು ಉತ್ತೇಜಿಸಲಿದೆʼ ಎಂದು ಹೇಳಿದ್ದಾರೆ.

 ಭಾರತ್ ಇನ್ವಿಟ್ಸ್ ಅಸೋಸಿಯೇಷನ್ ​​(ಬಿಐಎ) ಹೇಳಿಕೆ :

 ʼಅಭಿವೃದ್ಧಿ ಹೊಂದಿದ ಆರ್ಥಿಕತೆಗಳಲ್ಲಿ ಕಳೆದ ಹಲವಾರು ವರ್ಷಗಳಿಂದ  ಇನ್‌ಫ್ರಾಸ್ಟ್ರಕ್ಚರ್‌ ಇನ್ವೆಸ್ಟ್‌ಮೆಂಟ್‌ ಟ್ರಸ್ಟ್ಗಳು (ಐಎನ್‌ವಿಐಟಿಎಸ್‌- ಇನ್‌ವಿಟ್ಸ್‌) ಅಸ್ತಿತ್ವದಲ್ಲಿ ಇವೆ. ಭಾರತದ ಮಾರುಕಟ್ಟೆಯಲ್ಲಿ ಅವುಗಳನ್ನು  ಪರಿಚಯಿಸಿರುವುದರಿಂದ ಹೂಡಿಕೆದಾರರಿಗೆ   ವೈವಿಧ್ಯಮಯ ಹೂಡಿಕೆಯ ಹೊಸ ಸಾಧ್ಯತೆಗಳು ತೆರೆದುಕೊಂಡಿವೆ. ಸರ್ಕಾರವು ಬೃಹತ್ ಮೂಲಸೌಲಭ್ಯಗಳ ಯೋಜನೆಗಳನ್ನು ಕಾರ್ಯಗತಗೊಳಿಸಲು   ಗಮನ  ನೀಡಿರುವುದರಿಂದ ಮುಂಬರುವ ವರ್ಷಗಳಲ್ಲಿ ಈ ಕ್ಷೇತ್ರವು ತ್ವರಿತ ಗತಿಯಲ್ಲಿ ಬೆಳೆಯಲಿದೆ.  ಕಂಪನಿಯ ಉತ್ಪನ್ನ ಹಾಗೂ ಸೇವೆಗಳಿಂದ ಗ್ರಾಹಕರಿಗೆ ದೊರೆಯುವ ಪ್ರಯೋಜನಗಳೊಂದಿಗೆ ʼಇನ್‌ವಿಟ್ಸ್‌ʼಗಳು, ಈ ವಲಯದಲ್ಲಿನ ಹೂಡಿಕೆಯ ಪ್ರಯೋಜನ ಪಡೆದುಕೊಳ್ಳಲು ಹೂಡಿಕೆದಾರರಿಗೆ ಅತ್ಯುತ್ತಮ ಅವಕಾಶಗಳನ್ನು  ಒದಗಿಸಿಕೊಡಲಿವೆ.

ನಿಯಂತ್ರಕರು ಮತ್ತು ಸರ್ಕಾರಿ ಸಂಸ್ಥೆಗಳ ಜೊತೆಗಿನ ಸಹಯೋಗದಲ್ಲಿ ʼಬಿಐಎʼ ಮತ್ತು ʼಐಆರ್‌ಎʼ-  ಈ ಹೂಡಿಕೆ ಅವಕಾಶಗಳ ಆಕರ್ಷಣೆಯನ್ನು ಹೆಚ್ಚಿಸಲು ಈ ಹೂಡಿಕೆಯನ್ನು ಈಕ್ವಿಟಿ  ಅಥವಾ ಈಕ್ವಿಟಿಯಂತಹ ಹಣಕಾಸು ಉತ್ಪನ್ನವಾಗಿ ಷೇರುಪೇಟೆಗಳಲ್ಲಿ ತಮ್ಮ  ದ್ರವ್ಯತೆಯನ್ನು ಹೆಚ್ಚಿಸುತ್ತವೆ.

 ಭಾರತದಲ್ಲಿ ʼಆರ್‌ಇಐಟಿʼಗಳು ಮತ್ತು  ʼಇನ್‌ವಿಟ್‌ʼಗಳ ವಲಯದ ಬೆಳವಣಿಗೆಯಲ್ಲಿ ನಿರಂತರ ಬೆಂಬಲ ಮತ್ತು ಮಾರ್ಗದರ್ಶನ ನೀಡಿರುವುದಕ್ಕೆ ಭಾರತದ ಷೇರು ನಿಯಂತ್ರಣ ಮಂಡಳಿ (ಸೆಬಿ)  ಮತ್ತು ಹಣಕಾಸು ಸಚಿವಾಲಯಕ್ಕೆ ತಮ್ಮ ಕೃತಜ್ಞತೆ ಸಲ್ಲಿಸಿವೆ.

Media Contact:

Abhishek Banerjee
    |     abhishek@indianreitsassociation.com